ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಿದ ನಂತರ, ಅನ್ವಯವಾಗುವ ನಿಯಮಗಳು ಮತ್ತು ವಲಯ ನಿಯಮಾವಳಿಗಳ ಪ್ರಕಾರ ಪರಿಶೀಲಿಸಿ, ಪ್ರಸ್ತಾವನೆಯನ್ನು ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ, ಪ್ರಾಧಿಕಾರದ ಸಭೆಯ ತೀರ್ಮಾನದಂತೆ ಮತ್ತು ನಿಯಮಗಳ ಪ್ರಕಾರ ಶುಲ್ಕವನ್ನು ಪಾವತಿಸಿಕೊಂಡ ನಂತರ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ತಿದ್ದುಪಡಿ) ಕಾಯ್ದೆ, 2015 ಸೆಕ್ಷನ್ 17(2A) ಪ್ರಕಾರ ಭೂಮಿಯ ಮೇಲೆ ಗುರುತಿಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ತಾತ್ಕಾಲಿಕ ವಿನ್ಯಾಸಕ್ಕೆ ಅನುಮೋದನೆ ನೀಡಲಾಗುತ್ತದೆ. ಅನುಮೋದಿತ ತಾತ್ಕಾಲಿಕ ವಿನ್ಯಾಸದಂತೆ ಅಭಿವೃದ್ಧಿಪಡಿಸಿದ ನಂತರ ಅರ್ಜಿದಾರರು ಅಂತಿಮ ವಿನ್ಯಾಸಕ್ಕೆ ಅನುಮೋದನೆ ಪಡೆಯಲು ಸಂಬಂಧಪಟ್ಟ ಇಲಾಖೆಗಳಿಂದ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಪ್ರಮಾಣಪತ್ರಗಳನ್ನು ಪಡೆದು ಸಲ್ಲಿಸಿದ ನಂತರ ಹಾಗೂ ಪ್ರಾಧಿಕಾರದಿಂದ ಸ್ಥಳ ಪರಿಶೀಲಿಸಿದ ನಂತರ, ಪ್ರಾಧಿಕಾರದ ಸಭೆಯಲ್ಲಿ ವಿಷಯವನ್ನು ಮಂಡಿಸಿ, ಪ್ರಾಧಿಕಾರದ ಸಭೆಯ ತೀರ್ಮಾನದಂತೆ ನಾಗರಿಕ ಸೌಲಭ್ಯದ ನಿವೇಶನವನ್ನು ಪ್ರಾಧಿಕಾರಕ್ಕೆ ಮತ್ತು ರಸ್ತೆ, ಉದ್ಯಾನವನ ಪ್ರದೇಶವನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗೆ ಉಚಿತವಾಗಿ ಹಸ್ತಾಂತರಿಸಿಕೊಂಡು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ತಿದ್ದುಪಡಿ) ಕಾಯ್ದೆ, 2015 ಸೆಕ್ಷನ್ 17(2B)ಪ್ರಕಾರ  ಅಂತಿಮ ವಿನ್ಯಾಸ ಅನುಮೋದನೆಯನ್ನು ನೀಡಲಾಗುವುದು.

 

 

ಮೂಲ: ಬಿ.ಎಂ.ಐ.ಸಿ.ಎ.ಪಿ.ಎ, ಕರ್ನಾಟಕ ಸರ್ಕಾರ.