ಪೀಠಿಕೆ:-
ಬೆಂಗಳೂರು-ಮೈಸೂರು ನಡುವೆ ಹೆದ್ದಾರಿಯ ಯೋಜನೆಗಳನ್ನು ಕೈಗೊಳ್ಳಲು ಸರ್ಕಾರವು ನೈಸ್ ಸಂಸ್ಥೆಗೆ ಅನುಮೋದನೆ ನೀಡಿದ್ದು, ಈ ಹೆದ್ದಾರಿ ಯೋಜನೆಯಂತೆ ಸದರಿ ರಸ್ತೆಯ ಪಂಕ್ತೀಕರಣದ ಆಸುಪಾಸಿನಲ್ಲಿ ಅಭಿವೃದ್ಧಿಗಳು ಉಂಟಾಗಬಹುದೆಂದು ಸರ್ಕಾರವು ಮನಗಂಡು, ಸದರಿ ಅಭಿವೃಧ್ಧಿಗಳು ಯೋಜನಾಬದ್ಧವಾಗಿ ಬೆಳವಣಿಗೆಯಾಗಬೇಕೆಂಬ ಉದ್ದೇಶದಿಂದ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಎ)ರಂತೆ ಅಧಿಸೂಚನೆ ಸಂಖ್ಯೆ: ನಅಇ 377 ಎಂಐಬಿ 98, ದಿನಾಂಕ:13.07.1999ರಲ್ಲಿ ಈ ಯೋಜನಾ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶವನ್ನು ಸರ್ಕಾರವು ಘೋಷಿಸಿರುತ್ತದೆ ಹಾಗೂ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಾಯ್ದೆ 4(ಸಿ)ರಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ:ನಅಇ:377:ಎಂಐಬಿ:98, ದಿನಾಂಕ:05.10.1999 ರಲ್ಲಿ ಯೋಜನಾ ಪ್ರಾಧಿಕಾರವನ್ನು ಸರ್ಕಾರವು ರಚಿಸಿರುತ್ತದೆ. ಸ್ಥಳೀಯ ಯೋಜನಾ ಪ್ರದೇಶವನ್ನು ಪರಿಷ್ಕರಿಸಿ ಸರ್ಕಾರವು ಆದೇಶ ಸಂಖ್ಯೆ: ನಅಇ 130 ಬೆಂರೂಪ್ರಾ 2001, ದಿನಾಂಕ:20.11.2001ರಲ್ಲಿಅಧಿಸೂಚನೆ ಹೊರಡಿಸಿರುತ್ತದೆ. ಇದರ ಒಟ್ಟು ಕ್ಷೇತ್ರ 701.01 ಚ.ಕಿ.ಮೀ ಇದ್ದು, ಈ ಕ್ಷೇತ್ರವು 140 ಪೂರ್ಣ ಕಂದಾಯ ಗ್ರಾಮಗಳು, 54 ಭಾಗಶಃ ಗ್ರಾಮಗಳು ಮತ್ತು ಮದ್ದೂರು ಪಟ್ಟಣವನ್ನು ಒಳಗೊಂಡಿರುತ್ತದೆ.
ಬಿಎಂಐಸಿಎಪಿಎಯ ಅಧ್ಯಕ್ಷರು, ಸದಸ್ಯ-ಕಾರ್ಯದರ್ಶಿಗಳು, ಐವರು ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಪ್ರತಿನಿಧಿಗಳನ್ನೊಳಗೊಂಡು ಒಟ್ಟು 14 ಜನ ಸದಸ್ಯರನ್ನು ಒಳಗೊಂಡಿರುತ್ತದೆ. ಪ್ರಾಧಿಕಾರದಲ್ಲಿ ಅಧ್ಯಕ್ಷರಾಗಿ ಶ್ರೀ ಎಂ.ಜಯದೇವ ರವರು ಕಾರ್ಯನಿರ್ವಹಿಸುತ್ತಿದ್ದು, ಸದಸ್ಯ-ಕಾರ್ಯದರ್ಶಿಗಳು ಕಛೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿದ್ದು, ಕಛೇರಿಯ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಿರುತ್ತಾರೆ. ಬಿಎಂಐಸಿಎಪಿಎ ಯೋಜನಾ ಪ್ರದೇಶಕ್ಕೆ ಮಹಾಯೋಜನೆ ಸಿದ್ದಪಡಿಸುವುದು, ಮಹಾಯೋಜನೆಯಲ್ಲಿನ ಪ್ರಸ್ತಾವನೆಗಳನ್ನು ಜಾರಿಗೆ ತರುವುದು, ನಗರ ಯೋಜನಾ ಯೋಜನೆಗಳ ಅನುಷ್ಠಾನಗೊಳಿಸುವುದು ಬಿಎಂಐಸಿಎಪಿಎ ಯೋಜನಾ ಪ್ರಾಧಿಕಾರದ ಮುಖ್ಯಕಾರ್ಯವಾಗಿದೆ.
ಬಿಎಂಐಸಿಎಪಿಎ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಮಹಾಯೋಜನೆಯನ್ನುಸರ್ಕಾರದ ಆದೇಶ ಸಂಖ್ಯೆ: ನಅಇ 75 ಬೆಂರೂಪ್ರಾ 2003, ಬೆಂಗಳೂರು, ದಿನಾಂಕ:12.02.2004ರಲ್ಲಿಅಂತಿಮ ಅನುಮೋದನೆ ನೀಡಿದೆ. ಕೆಟಿಸಿಪಿ ಕಾಯ್ದೆ ಕಲಂ 13(4) ಮತ್ತುಯೋಜನಾ ಪ್ರಾಧಿಕಾರಗಳ ನಿಯಮಗಳು 1969ರ, ನಿಯಮ 33ರಡಿಯಲ್ಲಿ ದಿನಾಂಕ:07.10.2004ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ಮೂಲ: ಬಿಎಂಐಸಿಎಪಿಎ, ಕರ್ನಾಟಕ ಸರ್ಕಾರ.