ಪಟ್ಟಣ ಪಂಚಾಯತ್, ಪುರಸಭೆ ಮತ್ತು ನಗರಸಭೆಗಳ ವ್ಯಾಪ್ತಿಯಲ್ಲಿ ಪ್ರಾಧಿಕಾರದ ಅನುಮೋದಿತ ಬಡಾವಣೆಗಳಲ್ಲಿನ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅರ್ಜಿದಾರರು LBPAS ಪೋರ್ಟಲ್ ಮೂಲಕ ಕಟ್ಟಡ ನಕ್ಷೆಗೆ ಅನುಮೋದನೆ ಕೋರಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ. ವಲಯ ನಿಯಮಾವಳಿಗಳ ಪ್ರಕಾರ ಅರ್ಜಿಯ ಪರಿಶೀಲನೆಯ ನಂತರ, ಪ್ರಾಧಿಕಾರದಿಂದ LBPAS ಪೋರ್ಟಲ್ ಮೂಲಕ ಕಟ್ಟಡ ನಕ್ಷೆಗೆ ತಾಂತ್ರಿಕ ಅನುಮೋದನೆಯನ್ನು ನೀಡಲಾಗುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಾಧಿಕಾರದ ಅನುಮೋದಿತ ಬಡಾವಣೆಗಳಲ್ಲಿನ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅರ್ಜಿದಾರರು ಕಟ್ಟಡ ನಕ್ಷೆಗೆ ಅನುಮೋದನೆ ಕೋರಿ ಅಗತ್ಯ ದಾಖಲೆಗಳೊಂದಿಗೆ ನಿಗಧಿತ ಅರ್ಜಿಯ ಮೂಲಕ ಪ್ರಾಧಿಕಾರಕ್ಕೆ ನೇರವಾಗಿ ಅರ್ಜಿಯನ್ನು ಸಲ್ಲಿಸುತ್ತಾರೆ. ವಲಯ ನಿಯಮಾವಳಿಗಳ ಪ್ರಕಾರ ಅರ್ಜಿಯ ಪರಿಶೀಲನೆಯ ನಂತರ, ನಿಯಮಗಳಂತೆ ಶುಲ್ಕವನ್ನು ಪಾವತಿಸಿಕೊಂಡು ಪ್ರಾಧಿಕಾರದಿಂದ ಪ್ರಾರಂಭಿಕ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

 

 

ಮೂಲ: ಬಿ.ಎಂ.ಐ.ಸಿ.ಎ.ಪಿ.ಎ, ಕರ್ನಾಟಕ ಸರ್ಕಾರ.